ಗಲ್ಲಿ ಬೇಕರಿ ಸತತ ಚಿತ್ರೀಕರಣ
Posted date: 09 Tue, Jun 2015 – 09:50:53 AM

ಟ್ವಿನ್ ಟವರ್ ಎಂಟರ್‌ಟೈನ್‌ಮೆಂಟ್ ಪ್ರೈ. ಲಿ ಲಾಂಛನದಲ್ಲಿ ಮಹಮದ್ ಮುಸ್ತಫಾ ನಿರ್ಮಾಣದ ಗಲ್ಲಿ ಬೇಕರಿ ಚಿತ್ರಕ್ಕೆ ಮೋಹನ್ ಬಿ ಕೆರೆ ಸ್ಟಿಡಿಯೋವಿನಲ್ಲಿ  ಹಾಗೂ ಬ್ಯಾಟರಾಯನಪುರದಲ್ಲಿ ಸೂರ್ಯ, ಪ್ರಜ್ವಲ್ ಪೂವಯ್ಯ, ಅಭಿನಯಿಸಿದ ದೃಶ್ಯಗಳು ಅಲ್ಲದೆ ಮಲ್ಲೇಶ್ವರಂನ ಖಾಸಗಿ ಮನೆಯೊಂದರಲ್ಲಿ ರಮೇಶ್ ಭಟ್, ಜಯಲಕ್ಷ್ಮಿ, ಸಂತೋಷ್, ಸೂರ್ಯ ಪ್ರಜ್ವಲ್ ಪೂವಯ್ಯ ಇತರರು ಅಭಿನಯಿಸಿದ ದೃಶ್ಯಗಳಲ್ಲಿ ರಮೇಶ್ ಭಟ್ ಮನೆಯ ಹಿರಿಯ ತನ್ನ ನೋವು ಯಾರಿಗು ತಿಳಿಯಬಾರದೆಂದು ತನ್ನಲ್ಲೇ ಕೊರಗಿ ಮತ್ತೊಬ್ಬರಿಗೆ ಸಹಾಯ ನೀಡುತ್ತಿರುತ್ತಾರೆ ಆದರೂ ಮನಸ್ಸಿನಲ್ಲಿ ಯಾವುದೋ ಒಂದು ಆತಂಕ ಕಾಡುತ್ತಿದ್ದಾಗ ಅವರ ಮುಗ್ಧವಾದ ಅಭಿನಯದಲ್ಲಿ ಮೂಡಿಬಂದ ದೃಶ್ಯಗಳು ಚಿತ್ರೀಕರಣವಾದವು. ಕೆ.ಎಸ್.ಮೂರ್ತಿಗಳು ನಿರ್ದೇಶನದ ಚಿತ್ರದ ಛಾಯಾಗ್ರಹಣ -ರಮೇಶ್ ಕೊಯಿರಾ, ಸಂಗೀತ - ಸುನಾದ್ ಗೌತಮ್, ಚಿತ್ರಕತೆ-ರಾಧಾಕೃಷ್ಣ.ಕೆ, ಸಂಭಾಷಣೆ- ಶರಣ್ಯ ರಾಧಾಕೃಷ್ಣ, ಸಾಹಸ-ಕೌರವ ವೆಂಕಟೇಶ್, ಕಲೆ-ಬಾಬುಖಾನ್, ನೃತ್ಯ-ಮದನ್ ಹರಿಣಿ, ನಿರ್ವಹಣೆ-ಥಾಮಸ್-ಮೈಸೂರು ಕೃಷ್ಣ,  ತಾರಾಗಣದಲ್ಲಿ - ಸಂತೋಷ್, ಪ್ರಜ್ವಲ್ ಪೂವಯ್ಯ, ಸೂರ್ಯ, ರಮೇಶ್ ಭಟ್, ಜಯಲಕ್ಷ್ಮಿ, ಸುಚೀಂದ್ರ ಪ್ರಸಾದ್, ಯಮುನಾ ಶ್ರೀನಿಧಿ, ಪ್ರದೀಪ್ ಮುಂತಾದವರಿದ್ದಾರೆ.


GALLERY
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed